Saturday, April 22, 2023

 ಬಣ್ಣ ಬಣ್ಣದ ಸುಂದರ ಹೂವುಗಳು

ಚಿಲಿಪಿಲಿ ಕಲರವ ಮಾಡುವ ಪಕ್ಕಿಗಳು


ಆಗಸಕೆರುವ ಹಿತವಾದ ಸೂರ್ಯ

ಬೆಳಗಿನ ಪೂಜೆಯ ಘಂಟಾ ನಾದ


ತಣ್ಣನೆಯ ಸೂಸುವ ತಂಗಾಳಿ

ಮೆಲ್ಲಗೆ ಮೈ ಮರೆವ ಮನ


ಎಲ್ಲವೂ ನೀ ನೀಡುವ ಕರುಣೆ

ನಿನಗಿದೊ ನನ್ನ ಪುಟ್ಟ ವಂದನೆ

Saturday, April 15, 2023

ಅಬ್ಬರದ ಈ ಸಂಜೆಯು

ವರುಣ ಪವನರ ಅಬ್ಬರದ ಈ ಸಂಜೆಯು

ನಲ್ಲೆಯು  ನೆಲದಲಿ ನೀರು ಸಿಂಪಡಿಸಿದ ಹಾಗೆ


ಬೀಸುವ ಗಾಳಿಗೆ ಕಿಟಕಿಯ ಪದಕ ಹೊಡೆದು ಕೊಂಡಾಗ

ಮನೆಯ ಯಜಮಾನ/ನಿ ಯ ತಾಳ್ಮೆಯ ಪರೀಕ್ಷಿಸಿದ ಹಾಗೆ



ಓಡಿ ಹೋಗಿ ಹಾಕಲು ಕಿಟಕಿಯ ಪದಕವ 

ಮನೆಯಲ್ಲ ಸೂಸು ಮಣ್ಣಿನಲಿ ಅಲಂಕಾರ



ಮಕ್ಕಳು ಆಡುತಿಹರು ಬೇಸಿಗೆಯಮಳೆಯಲಿ ತುಂಬು ಮನದಿಂದ

ತಾಯಿ ತಂದೆ ಒಳಗೆಳೆಯತಿಹರು ಮಮತೆಯ ಬೈಗುಳದಿಂದ



-ರಾ ಮ ಕಿ

Monday, May 23, 2022

ತಾಯಿ  ಜಗದಂಬೆ, 


ಶರಣರ ವಚನಗಳು 

ಸಂತರ ಮಾತುಗಳು 

ಋಷಿ ಮುನಿಗಳ ಶ್ಲೋಕಗಳು 

ಎಲ್ಲರ ಸಾರ ಒಂದೇ 

ನಿನ್ನ ಹೊರತು ಜಗವಿರದು 

ನಿನ್ನೊಳು ಜಗವಿಹುದು 

ಆದರೂ ನಿನ್ನ ವಿನ: ಅನ್ಯ ವಿಚಾರ ಬಾರದಿರಲಿ 

ನಿನ್ನಲಿ ಅಚಲವಾದ ಭಕುತಿ ಇರಲಿ 

ನಿನ್ನ ಕರುಣೆ ಅನವರತ ಇರಲಿ 


ಸೋಲು ನಲಿವಿನ ಜೀವನ 

ನಿನ್ನ ಮನದಾಳದ ಆಟ 

ಗೆದ್ದರು ನೀನೆ ಸೋತರು ನೀನೆ 

ಏರಿಳಿತದ ಪಯಣದಲಿ 

ನಿನ್ನ ಬೆಳಕಿನ ಬೆಳಕಲಿ 

ನಿನ್ನದೊಡನೆ ನಿನ್ನೆಡೆಗೆ 

ನಿನ್ನೊಳು ನೀನೆ ಕರೆದೊಯ್ಯು 


Tuesday, August 11, 2020

ಕವಿಯಾಗಿದ್ದೆ    

ಕವಿಯ ಕನಸಾಗಿದ್ದೆ 

ಕನಸಿನ ಸೊಗಸಾಗಿದ್ದೆ 

ಆ ಸೊಗಸಿಗೆ ಸುವಾಸನೆಯಾಗಿದ್ದೆ 

ಆ ಸುವಾಸನೆ ಸಮರ್ಪಿಸಿದ್ದೆ 

ಸರ್ವವ್ಯಾಪಿ ಶೂನ್ಯಮಯಿಗೆ 

Monday, September 8, 2014

ತೆಂಗಿನ ಮರ

ತೆಂಗಿನ ಮರವೆ ತೆಂಗಿನ ಮರವೇ
ಮುಗಿಲ ಮುಟ್ಟೊ ಆಸೆ ನಿನಗೇಕೆ?
ನೋಡಲು ಅಂದ ಆ ನೀಲಿ ಬಾನು
ಬಿಸಿಲಲ್ಲಿ ಕೆಂಡ ಆ ಬಿರು ಬಾನು
ಸಂಜೆಯ ಚೆಂದ ಆ ಸವಿ ಬಾನು

ನಿನ್ನ ಗರಿಗೇಟಕದ ಆ ಮೋಡ
ಆದರೂ ಬಿಡದ ನಿನ್ನ ಛಲ
ದೂರ ಚಾಚಿದಟೂ ದೂರ ಮುಗಿಲ
ಬೆಳೆವ ರೈತ ಬೆಳೆಸುತಿಹ ನಿನ್ನ
ನಿಸ್ವಾರ್ಥದಿ ನಿ ಕಲ್ಪತರು

ಐವತ್ತೋ ನೂರೋ ನಿನ್ನಾಯಸ್ಸು
ಸಾಕಿನ್ನು ನಿನ್ನ ಕಸರತ್ತು
ಸ್ಪರ್ಷಿಸು ಭೂತಾಯಿಯ ಚರಣವನು
ಕರಗಿದೆ ಭೂತಾಯಿಯ ಮನಸ್ಸು
ಮೇಚ್ಹಿದಾ ಪರಮಾತ್ಮ ನಿನ್ನಾ ತಪ್ಪಸ್ಸು


Wednesday, September 25, 2013

 ಗಸಗಸೆ ಪಾಯಸ 

ಕಂಗಾಲದ ಹಸಿವಿಗೆ
ಕೈ ಜಾರಿದ ಆ ತುತ್ತು
ಇನ್ನು ಮಾದಿಲ್ಲ ಆ ನೋವು
ಮತ್ತೇ ಆಶಿಸಿತು ನಿನಗಾಗಿ||

ತಿಳಿ ಬಿಳಿ ಬಣ್ಣದಿ ನೀನು
ಘಮಿಘಮಿಸುವಾ ನಿನ್ನ ಗುಣ
ರಸಿಕರ ಮನ ಗೆದ್ದ ರಸ ಸ್ವಾದ
ಸಾಟಿಯಿರದ ಆನಂದ ನೀನು||

ಸಕ್ಕರೆ ಖಾಯಿಲೆಗೆ ನೀ ಸಲ್ಲ
ಮತ್ತಿನ ಮಂಪರು ನೀ ಕ್ಷಣಕೆ
ನೀರೇಯರ ಗಮ್ಮತ್ತು ಆ ಸವಿರುಚಿ
ಆದರು ನೀ ಅಪರೂಪ ಗಸಗಸೆ ಪಾಯಸ||




Saturday, February 25, 2012

ಲಾಲಿ.....

ಲಾಲಿ....ಎನ್ನಳಿಯರಾಜ




ಎಲ್ಲಿರುವೆ ದೊರೆಯೇ

ಬಾರಯ್ಯ ಬಾರಯ್ಯ

ಅಣ್ಣಯ್ಯನ ಒಡಲಲ್ಲಿ

ಅತ್ತಿಗೆಯ ಮಡಿಲಲ್ಲಿ

ಒಲವಿನ ಸಾಗರದಲಿ

ಮೀಯುಸುವೆ ನಿನ್ನ ಒಡೋಡಿ ಬಾ||೧||


ಚಿತ್ತಚೊರ ಕೃಷ್ಣನಂತೆ

ಹೆತ್ತ ಮಗ ರಾಮನಂತೆ

ಮೂರುಲೊಕನಾಳ್ವ ಮುಕ್ಕಣ್ಣಂತೆ

ಸಿದ್ಧ ಹಸ್ತದ ಸಿದ್ದಾರೂಢನಂತೆ

ಘನ ಕೀರ್ತಿ ಸಾರುವ ಗಣೀಶನಂತೆ

ಶಕ್ತಿಶಾಲಿ ಹನುಮನಂತೆ||೨||


ಸುಕೊಮಲ ಮನಸಿನ ಕುಸುಮದಂತೆ

ದೇವಮಂದಿರದ ಘಂಟನಾದದಂತೆ

ಅಜ್ಞಾನಕೆ ರವಿಯ ಜ್ಞಾನದ ಕಿರಣದಂತೆ

ಸುಜ್ಞಾನಕೆ ಸುಂದರ ಸ್ವಪ್ನದಂತೆ

ಮಂಗಲಮೂರ್ತಿಯ ಶುಭಮಂಗಳದಂತೆ

ಬಾ ಬಾ ಬೇಗ ಬಾ ನನ್ನಪ್ಪ ಮಲ್ಲಿಕಾರ್ಜುನನ್ ಅಂಗಳಕೆ||೩||


ಚಿನ್ನಿ-ದಾಂಡು ಕಾಯುತಿಹವು ನಿನ್ನೊಡನಾಟಕೆ

ಮುತ್ತು -ರತ್ನಗಳು ನಿನ್ನ ಅಲಂಕಾರಕ್ಕೆ

ಹೂವು-ಹಣ್ಣು-ಧಾನ್ಯ ನಿನ್ನ ಸ್ವಾಗತಕೆ

ಮಂದಾರದ ಕಾಡಿಗೆ ನಿನ್ನ ದೃಷ್ಟಿಬೊಟ್ಟಿ ಗೆ

ಚಂದನದ ಲೇಪ ನಿನ್ನ ಶ್ರೀತನುವಿಗೆ

ಬಾ ಬಾರೋ ಬಾ ಎನ್ನಳಿಯರಾಜ ಬೇಗ ಬಾ||೪||