Sunday, July 12, 2009

ಓ ಬಾನಾಡಿ
ಹಾರುವೆ ಎಲ್ಲಿ?
ಕೇಳಿಲ್ಲಿ..
ಭುವಿಯಿದು
ಬಂಧನವಿಲ್ಲದ
ಬಾನಂಗಳವಲ್ಲ
ಸ್ವಚ್ಚಂಧ ತುಂಬಿದ
ಸಚ್ಚಿದಾನಂದವಲ್ಲ!!

ಭುವಿಯಿದು
ಜನರು ಕಟ್ಟಿದ
ಮುರಿವ ಮನೆಯಿಲ್ಲಿ
ಜನರಿಗಾಗಿ ಮೈತಳೆದ
ಪ್ರಕೃತಿ ಸೌಂದರ್ಯ !!

ಮೇಲ್ನೋಟಕ್ಕೆ ಚೆನ್ನಾಟ
ಭೂತಾಯಿಯ ಚೆಲ್ಲಾಟ
ಭೂ ಗರ್ಭದೊಳಗೆ ಬೆಂಕಿಯಾಟ
ಧರೆಗೆ ಕಳೆಯಿಲ್ಲ
ಧರಣಿಯೋಡೆಯನ
ಈ ಮಕ್ಕಳಿಗೆ ಬೇರೆ ಗತಿಯಿಲ್ಲ !!!

ನಿನ್ನಿಂದ ...

ನಿನ್ನಿಂದ ....by Raji

ಗೀತ ಗಂಧ ಹರಡುತಿದೆ
ನಿನ್ನ ಬನದ ಹೂವಿನಿಂದ

ಮಾತು ಮಾತಿನಲ್ಲಿ ಚಿಮ್ಮುತಿಹುದು
ನಿನ್ನ ಒಲುಮೆ ವದನದಿಂದ

ಕಾಯ ಕಾರ್ಯದಲ್ಲಿ ಬೆರೆಯುತಿಹುದು
ನಿನ್ನ ಶಕ್ತಿ ಯುಕ್ತಿಯಿಂದ

ಬೀಜ ಹುಟ್ಟಿ ಬೆಳೆಯುತಿಹುದು
ನಿನ್ನ ಪ್ರಕೃತಿ ಚೆಲುವಿನಿಂದ

ಹಣತೆ ಚಾಚಿ ಬೆಳಗುತಿಹುದು
ನಿನ್ನ ಕೆಂಡ -ಕಾವಿನಿಂದ

ಭಾವ ಭಾವ ಬೇರೆಯುತಿಹುವು
ನಿನ್ನ ವಿಸ್ಮಯ ಬೆಸುಗೆಯಿಂದ

Thursday, July 9, 2009

HEAVY

by Raji

Oh heavy……..
U r so heavy…
None r ready,
To lean over them,
Or to give support….

Might be U r the one,
Who will give Ever,
Support to Other…
Lean over Only on You..

Yes, Earth is also
Heavy like U…
Hence the only support,
to rest other…

Oh Heavy….
U r from Heavy Earth
U can lean over
Only on that Earth
Which will tolerate
Ur Heavy weight..!

Oh Heavy
Don’t Worry……..
The biggest heavy,
The heaviest,
The Earth is ready
Ever to support U..

Saturday, July 4, 2009

ಉಡುಗೊರೆ by raji

ಹೊನ್ನಿನ ಬಣ್ಣದ ಹೊಂಬಿಸಿಲಲ್ಲಿ
ಬಣ್ಣ ಬಣ್ಣದ ಚಿಟ್ಟೆಯು ತುಂಬಿದ
ಬಗೆ ಬಗೆ ಹೂವಿನ ತೋಟದಲಿ …

ಭೂತಾಯಿಯ ಮಡಿಲೆರುವ ಆ ಸೂರ್ಯ
ಆಗಸದಾತನ ಭುಜವನೆರುವ ಈ ಚಂದಿರ
ಶೋಭೆಯ ತರುತಿವೆ ಮಧ್ಯಮ ಮೈತ್ರಿ ತಾರ ಬಳಗ ...

ನನ್ನೋಡನಾಡುವ ಗೆಳತಿಯೇ /ಗೆಳೆಯನೆ
ನಿನಗೆ ಅಂದದ ಉಡುಗೊರೆ ಕೊಡಲೆಂದು
ಆ ದೇವನ ನಿತ್ಯ ಬೆಡುತಲಿರುವೆ ...

ಕಣ್ಣಿಗೆ ಕಾಣದ ಆ ದೇವನು
ನನ್ನೀ ಮೊರೆಯನು ಕೆಳುತಲಿರುವ
ಅದಕೀ ಸಡಗರ ನಿನಗೆಂದ ....

ಮಳೆಗಾಲ by raji


ಮೋಡವು ಕವಿದಿದೆ
ಮಬ್ಬಾವರಿಸಿದೆ
ಹಗಲಲಿ ಇರುಳು ಇನುಕುತಿದೆ ..
ಅದು ಮಳೆಗಾಲ

ಅವೇ ಮಳೆ ಹನಿಗಳು
ಕಾಲವು ಮಾತ್ರ ಇಂದಿನದು ..
ಅದು ಒಂದು ಕಾಲ
ಅದು ಮಳೆಗಾಲ
ಸಂಬ್ರ್ಹಮ ತರುವ ಆ ಸವಿಗಾಲ...

ಮಳೆಯಲಿ ನೆನೆದು
ಚಳಿಯಲಿ ಕೊರಗಿ
ಅಮ್ಮನ ಆರೈಕೆಯಲಿ ಅಪ್ಪನ ಬೈಗುಳ ..
ಬಿಸಿ ಬಿಸಿ ಪಾಯಸ
ಕುರು ಕುರು ಚಕ್ಕುಲಿ
ತಿನ್ನುತ ಕುಳಿತರೆ ಚಲಿಯೆಲ್ಲ ಆಚೆ .....

ಹಿತ್ತಲಿನಲ್ಲಿ ನಾನೇ ನೆಟ್ಟ ಆ ಗಿಡ ಬಳ್ಳಿಗಳು
ಅಯ್ಯೋ ಪಾಪ ನೆನಯೂತಿವೆ ಮಳೆಯಲಿ ....
ಆದರೂ ಕೊಡುತಿವೆ
ಹೂ-ಹಣ್ಣು ಚಳಿ-ಮಳೆ ಎನ್ನದೆ
ಕರ್ಮ ಯೊಗವ ಕಲಿಸುತಲಿ ...

ನೋಡುತ ನೋಡುತ
ಹನಿ ಹನಿ ಮಳೆಯಲ್ಲಿ
ಅಂದದ ಇನಿಯನು ಇನುಕುತಲಿದ್ದ ..
ಚೆನ್ನಾದ ಚೆಲ್ಲಾತವಾಡುವ ಚೆನ್ನಿನಿಯ
ಸಣ್ಣನೆ ಗಾಳಿ ಬೀಸಿದರೆ ಜೋರು
ಚನದಲಿ ಮರೆಯಾಗುತಿದ್ದ ..
ಈಗಲೂ ಅದೇ ಮಳೆಗಾಲ
ಅದೇ ಮಳೆ ಹನಿಗಳು
ಆದರೂ ಕಾಣನು ಇನಿಯನು ಮಾತ್ರ..

ಈ B.E. ಬದುಕಿನಲಿ
ಬರೀ ಗೊಂದಲದಲ್ಲಿ
ಮರೆತೇ ಹೋಗುತಿದೆ ಆ ಸುಂದರ ಬದುಕು ..
ಇನ್ನೂ B.E. ಮುಗಿದಿಲ್ಲ
ಈಗಲೇ ಈ ಗೋಳು
ಅಯ್ಯೋ ದೇವರೇ ಮುಂದಿನದೇನೋ
ನೋಡಲಾಗದು ಆ ಬಾಳು ..