Sunday, March 20, 2011

ನೀನು....!!

ನೀನು....!!




ಕಣ್ಣಿಗೆ ಕಾಣದ ಅಂದ ನೀನು


ಕೈಗೆ ದೊರಕದ ಸನಿಹ ನೀನು||೧||




ಸಾಟಿ ಇಲ್ಲ ನಿನ್ನ ಸ್ನೇಹಕೆ


ಮನವಿಲ್ಲ ನಿನ್ನ ಅಗಲಿಕೆಗೆ||೨||




ದಾರಿಗೆ ದೀಪವಾದೆ ಕಗ್ಗತ್ತಲಿನಲಿ


ಜೀವಕೆ ಉಸಿರಾದೆ ನಿರ್ಜಿವದಲಿ||೩||




ಗಾನ ಲಹರಿ ನೀನಾದೆ ಮೌನದಲಿ


ಸುಂದರ ಕಥೆಯದೆ ಸಂಗಮದಲಿ||೪||




 ಬಾ  ಬಾ ಎನ್ನೆದೆಯಗೂಡಿಗೆ


ನಿನ್ನೊಲವು ಕಾಯುತಿಹುದು ನಿನಗಾಗಿ||೫||

from my diary..

Last day when i saw one my classmate blog where he mentained regular updates ... [hmmm.. well ,i cant ;P :( ] felt his great patience and involment..and thought to write something..since i joined this mtech nothing inspiring me may be am not going out of this academic world or getting so busy in assignments (he he he) dont know .. so i opend my diary which is collection of my all poems and spending myself here for while!!..

these are like ಚುಟುಕು ...when i joined BE in BEC.. BGK- SUN inspired me this


ಸುಂದರ ಹುಡುಗಿಯ
ಸುಂದರ ವದನಕ್ಕೆ
ಸುಂದರನು ಮುತ್ತಿಟ್ಟ..


ಸುಂದರಿಯ ಸುಂದರ ಮೊಗ
ಕೆಂಪೇರಿತು,
ನಂತರ ಕಪ್ಪಾಯಿತು..


ಬೆಚ್ಚಿ ಬಿದ್ದ ಸುಂದರಿ
ಸುಂದರ ಮೊಗ ನೋಡಿದರೆ
ಸುಂದರ ಸುಡುವ ಸೂರ್ಯನಾಗಿರಬೇಕೆ.. ??
..............................................................................
i still remember its os class but may be in 4th sem or 5th am not sure..
there ll be lot competation for first benches as latecomer i enjoyed llb he he
and looking at all my classmates these words came out..

ಬಿನ್ನ ಬಿನ್ನ ಬಣ್ಣದಲ್ಲಿ
ಮೂಡುತಿಹುದು ರಂಗೋಲಿ
ಅದು ಕಲಾವಿದನ ಕುಂಚದಲಿ ..


ಕಲಾವಿದನ ಕೌಶಲತೆಯಲ್ಲಿ
ರಂಗೋಲಿಗೆ ಮೆರಗು
ಆದರೀ ರಂಗೋಲಿಗೆ
ವರ್ಷಗಳೇ ಬೇಕು..


ವಿಭಿನ್ನ ಬಣ್ಣ
ತುಂಬುವ ಕಲಾವಿದ
ತಪ್ಪಿದರೆ ಕೌಶಲ್ಯತೆ
ರಂಗೋಲಿ ಆಗುವುದು ಬಿರುಗಾಳಿ..
............................................................................
next day one more poem as..
 
ಬಣ್ಣ ಬಣ್ಣದ ರಂಗೋಲಿ

ಒಂದೆಡೆ ಕೆಂಪು ಇನ್ನೋದೆದೆ ಹಳದಿ
ನೀಲಿ ಹಸಿರು ಜಾಂಬಳಿ
ಒಂದೋ ಎರಡೋ ನಾನಾ ತರಹ...


ಸುಂದರ ಕಲಾವಿದ
ಹೊಂದಿಸುತಿಹ ಸುಂದರ
ಸುಂದರತೆಯಾತನ ಕಲೆಯಲ್ಲಿ....


ಈಗಿನ್ನೂ ಮೂಡಿಸಿಹನು
ಬರೀ ಕಲ್ಪನೆಯ ಚಿತ್ರ
ಕಲ್ಪನೆಯ ಚಿತ್ರವಾದರೂ
ಭ್ರೂಣದಂತೆ ಸ್ಪಂದಿಸುತ್ತವೆ..


ನಾ ಕಾಣೆ ರಂಗನಿಂದ ರಂಗಾದ
ಈ ಪರಿಪೂರ್ಣ ರಂಗೋಲಿ
ರೂಪಗೊಳ್ಳುವುದ್ಯಾವಾಗ..