Thursday, August 5, 2010

JEEVAN JYOTI(to all WomaN bcoz she is great but man don’t knw it and ll never understand her in peak time)
By rajikisan
ಜೀವನ ಜ್ಯೋತಿ..
ಭುವಿಯ ಮಡಿಲಲ್ಲಿ
ಹೂವಾಗಿ ಅರಳಿತು ಹತ್ತಿ ..

ಬೆಳ್ಳಿಯ ಬಿಲಿಯನು
ಪರಿಶುದ್ಧ ಸುಗಂಧವನ್ನು
ವರವಾಗಿ ಪಡೆದ ಹತ್ತಿ ..

ಭಕ್ತನ ಕೈಯಲ್ಲಿ
ಹತ್ತಿಯಾಗಿತ್ತು ಬತ್ತಿ
ಎಣ್ಣೆಯ ಸಮ್ಮುಖದಲ್ಲಿ
ಬೆಳ್ಳನೆ ಬೆಳಕಿನ
ಮಿಲನಕೆ ಕಾದಿತ್ತು ಹತ್ತಿ..

ದೇವ ಪೂಜೆಗೆ
ಮಡಿಯಾಗಿ
ಚಳಿಗೆ ಶಖವಾಗಿ
ಮೆತ್ತಗೆ ಗಾದಿಯಾಗಿ
ಮಾನಕ್ಕೆ ಉಡುಗೆಯಾಗಿ
,ಮೆರೆಯುತಿಹ ಹತ್ತಿ..

ಸುಡುವ ಬೆನ್ಕಿಯೊಡನೆ
ಶ್ರಂಗಾರ ಮಿಲನದಲಿ
ಬೆಳಕನು ನೀಡುತ್ …
ಧನ್ಯತೆಯಲಿ
ಆಹುತಿಯಾಯಿತು ಹತ್ತಿ....

Wednesday, July 21, 2010

she ate my head to write poem..
finally words came as
ಸುಚಿ.................
ಛಬ್ಬಿ ಛಬ್ಬಿ ಛಬ್ಬಿ
ತುಂಬು ಗಲ್ಲದ ಡುಮ್ಮಿ||೧||

ಪಿಂಕಿ ಪಿಂಕಿ ಪಿಂಕಿ
ಕೊಮಲ ತನುವಿನ ಪುಟಾನಿ||೨||

ಅಕ್ಕರೆಯ ಸವಿ ನೀ
ಸ್ನೇಹದ ಖನಿ ನೀ||೩||

ಹಾಸ್ಯದಿ ನಗು ನೀ
ಬಿಂದಾಸ ನೃತ್ಯರಾಣಿ||೪||

ಸಾದಾ ಸೀದಾ ಬೆಡಗಿ
ಓ ಹಸನ್ಮುಖಿ ನಗುತಿರು
ಸದಾ ನೀ ಚಿನ್ಮಯಿ||೫||

Sunday, May 2, 2010

ಹೀಗೋಂದು ಸಂಜೆ LH(ladies hostel) ನಲಿ...



ಹೊನ್ನಾಟಕೆ ಸಜ್ಜಾಗುತಿಹ ರವಿಯು ಬಾನಂಗಳದಿ
ಗಾಳಿಯಂತ್ರಗಳು ತಿರುಗುತಿಹವು ಎದುರಲಿ
ವೇಗದೂತನ ನಿಯಂತ್ರಣದಲಿ||1||

ಬ್ರಂದಾವನವೇನಲ್ಲ ಈ garden
(ಕೃಷ್ಣನಿದ್ದರೆ )ಬ್ರಂದಾವನಕಿಂತ ಕಮ್ಮಿಯೆನಿಲ್ಲ
ಆದರೂ ಹಕ್ಕಿ ಪಕ್ಕಿಯ ಉಲುವು ಅಪರೂಪ||2||

ಅಲ್ಲಿ ಇಲ್ಲಿ ಎಲ್ಲೆಡೆ ಕುಳಿತಿಹರು ಬಾಲೆಯರು
ಪುಸ್ತಕ ,laptop mobile ಜೊತೆ
ಆದರೂ VTU ಕೊಡುವುದಿವರಿಗೆ ಪೂಣ್ರಾಂಕ.|| 3||

ಗಂಟೆಗೊಮ್ಮೆ ಬರುವವು mess ಗಾಡಿಗಳು
ತರುವವು ತರ ತರ ಸಾಮಗ್ರಿಗಳನ್ನು
ಆದರೂ ಹಿಡಿಸದು ಎಲ್ಲಿನ್ ಊಟ ತಿಂಡಿ ಯಾರಿಗೂ...||4||

ಅಲ್ಲಿ ಆಡುತಿಹರು ಟೆನ್ನಿಸ ಗ್ರೌನ್ದ್ ನಲಿ
ಎಲ್ಲಿ ಆಡುತಿಹರು ಮಾತುಗಳನು mobile ನಲಿ
ಕೆಲಸಗಾರದು ನಡೆಸಿಹರು ಕೆಲಸವನು ನಿರಂತರದಲಿ..||5||

ಸವಳು ನೀರು ಕುಡಿವ ನೀರೆಯರಿವರು
ಅಹುದು ಬೆಳದಿಂಗಳ ಬಾಲೆಯರಿವರು
ಆದರೂ ಮನೆ ಬೆಳಗುವ ಬೆಡಗಿಯರಿವರು.....||6||

Sunday, July 12, 2009

ಓ ಬಾನಾಡಿ
ಹಾರುವೆ ಎಲ್ಲಿ?
ಕೇಳಿಲ್ಲಿ..
ಭುವಿಯಿದು
ಬಂಧನವಿಲ್ಲದ
ಬಾನಂಗಳವಲ್ಲ
ಸ್ವಚ್ಚಂಧ ತುಂಬಿದ
ಸಚ್ಚಿದಾನಂದವಲ್ಲ!!

ಭುವಿಯಿದು
ಜನರು ಕಟ್ಟಿದ
ಮುರಿವ ಮನೆಯಿಲ್ಲಿ
ಜನರಿಗಾಗಿ ಮೈತಳೆದ
ಪ್ರಕೃತಿ ಸೌಂದರ್ಯ !!

ಮೇಲ್ನೋಟಕ್ಕೆ ಚೆನ್ನಾಟ
ಭೂತಾಯಿಯ ಚೆಲ್ಲಾಟ
ಭೂ ಗರ್ಭದೊಳಗೆ ಬೆಂಕಿಯಾಟ
ಧರೆಗೆ ಕಳೆಯಿಲ್ಲ
ಧರಣಿಯೋಡೆಯನ
ಈ ಮಕ್ಕಳಿಗೆ ಬೇರೆ ಗತಿಯಿಲ್ಲ !!!

ನಿನ್ನಿಂದ ...

ನಿನ್ನಿಂದ ....by Raji

ಗೀತ ಗಂಧ ಹರಡುತಿದೆ
ನಿನ್ನ ಬನದ ಹೂವಿನಿಂದ

ಮಾತು ಮಾತಿನಲ್ಲಿ ಚಿಮ್ಮುತಿಹುದು
ನಿನ್ನ ಒಲುಮೆ ವದನದಿಂದ

ಕಾಯ ಕಾರ್ಯದಲ್ಲಿ ಬೆರೆಯುತಿಹುದು
ನಿನ್ನ ಶಕ್ತಿ ಯುಕ್ತಿಯಿಂದ

ಬೀಜ ಹುಟ್ಟಿ ಬೆಳೆಯುತಿಹುದು
ನಿನ್ನ ಪ್ರಕೃತಿ ಚೆಲುವಿನಿಂದ

ಹಣತೆ ಚಾಚಿ ಬೆಳಗುತಿಹುದು
ನಿನ್ನ ಕೆಂಡ -ಕಾವಿನಿಂದ

ಭಾವ ಭಾವ ಬೇರೆಯುತಿಹುವು
ನಿನ್ನ ವಿಸ್ಮಯ ಬೆಸುಗೆಯಿಂದ

Thursday, July 9, 2009

HEAVY

by Raji

Oh heavy……..
U r so heavy…
None r ready,
To lean over them,
Or to give support….

Might be U r the one,
Who will give Ever,
Support to Other…
Lean over Only on You..

Yes, Earth is also
Heavy like U…
Hence the only support,
to rest other…

Oh Heavy….
U r from Heavy Earth
U can lean over
Only on that Earth
Which will tolerate
Ur Heavy weight..!

Oh Heavy
Don’t Worry……..
The biggest heavy,
The heaviest,
The Earth is ready
Ever to support U..

Saturday, July 4, 2009

ಉಡುಗೊರೆ by raji

ಹೊನ್ನಿನ ಬಣ್ಣದ ಹೊಂಬಿಸಿಲಲ್ಲಿ
ಬಣ್ಣ ಬಣ್ಣದ ಚಿಟ್ಟೆಯು ತುಂಬಿದ
ಬಗೆ ಬಗೆ ಹೂವಿನ ತೋಟದಲಿ …

ಭೂತಾಯಿಯ ಮಡಿಲೆರುವ ಆ ಸೂರ್ಯ
ಆಗಸದಾತನ ಭುಜವನೆರುವ ಈ ಚಂದಿರ
ಶೋಭೆಯ ತರುತಿವೆ ಮಧ್ಯಮ ಮೈತ್ರಿ ತಾರ ಬಳಗ ...

ನನ್ನೋಡನಾಡುವ ಗೆಳತಿಯೇ /ಗೆಳೆಯನೆ
ನಿನಗೆ ಅಂದದ ಉಡುಗೊರೆ ಕೊಡಲೆಂದು
ಆ ದೇವನ ನಿತ್ಯ ಬೆಡುತಲಿರುವೆ ...

ಕಣ್ಣಿಗೆ ಕಾಣದ ಆ ದೇವನು
ನನ್ನೀ ಮೊರೆಯನು ಕೆಳುತಲಿರುವ
ಅದಕೀ ಸಡಗರ ನಿನಗೆಂದ ....