ಬಣ್ಣ ಬಣ್ಣದ ಸುಂದರ ಹೂವುಗಳು
ಚಿಲಿಪಿಲಿ ಕಲರವ ಮಾಡುವ ಪಕ್ಕಿಗಳು
ಆಗಸಕೆರುವ ಹಿತವಾದ ಸೂರ್ಯ
ಬೆಳಗಿನ ಪೂಜೆಯ ಘಂಟಾ ನಾದ
ತಣ್ಣನೆಯ ಸೂಸುವ ತಂಗಾಳಿ
ಮೆಲ್ಲಗೆ ಮೈ ಮರೆವ ಮನ
ಎಲ್ಲವೂ ನೀ ನೀಡುವ ಕರುಣೆ
ನಿನಗಿದೊ ನನ್ನ ಪುಟ್ಟ ವಂದನೆ
ವರುಣ ಪವನರ ಅಬ್ಬರದ ಈ ಸಂಜೆಯು
ನಲ್ಲೆಯು ನೆಲದಲಿ ನೀರು ಸಿಂಪಡಿಸಿದ ಹಾಗೆ
ಬೀಸುವ ಗಾಳಿಗೆ ಕಿಟಕಿಯ ಪದಕ ಹೊಡೆದು ಕೊಂಡಾಗ
ಮನೆಯ ಯಜಮಾನ/ನಿ ಯ ತಾಳ್ಮೆಯ ಪರೀಕ್ಷಿಸಿದ ಹಾಗೆ
ಓಡಿ ಹೋಗಿ ಹಾಕಲು ಕಿಟಕಿಯ ಪದಕವ
ಮನೆಯಲ್ಲ ಸೂಸು ಮಣ್ಣಿನಲಿ ಅಲಂಕಾರ
ಮಕ್ಕಳು ಆಡುತಿಹರು ಬೇಸಿಗೆಯಮಳೆಯಲಿ ತುಂಬು ಮನದಿಂದ
ತಾಯಿ ತಂದೆ ಒಳಗೆಳೆಯತಿಹರು ಮಮತೆಯ ಬೈಗುಳದಿಂದ
-ರಾ ಮ ಕಿ
ತಾಯಿ ಜಗದಂಬೆ,
ಶರಣರ ವಚನಗಳು
ಸಂತರ ಮಾತುಗಳು
ಋಷಿ ಮುನಿಗಳ ಶ್ಲೋಕಗಳು
ಎಲ್ಲರ ಸಾರ ಒಂದೇ
ನಿನ್ನ ಹೊರತು ಜಗವಿರದು
ನಿನ್ನೊಳು ಜಗವಿಹುದು
ಆದರೂ ನಿನ್ನ ವಿನ: ಅನ್ಯ ವಿಚಾರ ಬಾರದಿರಲಿ
ನಿನ್ನಲಿ ಅಚಲವಾದ ಭಕುತಿ ಇರಲಿ
ನಿನ್ನ ಕರುಣೆ ಅನವರತ ಇರಲಿ
ಸೋಲು ನಲಿವಿನ ಜೀವನ
ನಿನ್ನ ಮನದಾಳದ ಆಟ
ಗೆದ್ದರು ನೀನೆ ಸೋತರು ನೀನೆ
ಏರಿಳಿತದ ಪಯಣದಲಿ
ನಿನ್ನ ಬೆಳಕಿನ ಬೆಳಕಲಿ
ನಿನ್ನದೊಡನೆ ನಿನ್ನೆಡೆಗೆ
ನಿನ್ನೊಳು ನೀನೆ ಕರೆದೊಯ್ಯು