Showing posts with label ಲಾಲಿ... Show all posts
Showing posts with label ಲಾಲಿ... Show all posts

Saturday, February 25, 2012

ಲಾಲಿ.....

ಲಾಲಿ....ಎನ್ನಳಿಯರಾಜ




ಎಲ್ಲಿರುವೆ ದೊರೆಯೇ

ಬಾರಯ್ಯ ಬಾರಯ್ಯ

ಅಣ್ಣಯ್ಯನ ಒಡಲಲ್ಲಿ

ಅತ್ತಿಗೆಯ ಮಡಿಲಲ್ಲಿ

ಒಲವಿನ ಸಾಗರದಲಿ

ಮೀಯುಸುವೆ ನಿನ್ನ ಒಡೋಡಿ ಬಾ||೧||


ಚಿತ್ತಚೊರ ಕೃಷ್ಣನಂತೆ

ಹೆತ್ತ ಮಗ ರಾಮನಂತೆ

ಮೂರುಲೊಕನಾಳ್ವ ಮುಕ್ಕಣ್ಣಂತೆ

ಸಿದ್ಧ ಹಸ್ತದ ಸಿದ್ದಾರೂಢನಂತೆ

ಘನ ಕೀರ್ತಿ ಸಾರುವ ಗಣೀಶನಂತೆ

ಶಕ್ತಿಶಾಲಿ ಹನುಮನಂತೆ||೨||


ಸುಕೊಮಲ ಮನಸಿನ ಕುಸುಮದಂತೆ

ದೇವಮಂದಿರದ ಘಂಟನಾದದಂತೆ

ಅಜ್ಞಾನಕೆ ರವಿಯ ಜ್ಞಾನದ ಕಿರಣದಂತೆ

ಸುಜ್ಞಾನಕೆ ಸುಂದರ ಸ್ವಪ್ನದಂತೆ

ಮಂಗಲಮೂರ್ತಿಯ ಶುಭಮಂಗಳದಂತೆ

ಬಾ ಬಾ ಬೇಗ ಬಾ ನನ್ನಪ್ಪ ಮಲ್ಲಿಕಾರ್ಜುನನ್ ಅಂಗಳಕೆ||೩||


ಚಿನ್ನಿ-ದಾಂಡು ಕಾಯುತಿಹವು ನಿನ್ನೊಡನಾಟಕೆ

ಮುತ್ತು -ರತ್ನಗಳು ನಿನ್ನ ಅಲಂಕಾರಕ್ಕೆ

ಹೂವು-ಹಣ್ಣು-ಧಾನ್ಯ ನಿನ್ನ ಸ್ವಾಗತಕೆ

ಮಂದಾರದ ಕಾಡಿಗೆ ನಿನ್ನ ದೃಷ್ಟಿಬೊಟ್ಟಿ ಗೆ

ಚಂದನದ ಲೇಪ ನಿನ್ನ ಶ್ರೀತನುವಿಗೆ

ಬಾ ಬಾರೋ ಬಾ ಎನ್ನಳಿಯರಾಜ ಬೇಗ ಬಾ||೪||