ನಿನ್ನಿಂದ ....by Rajiಗೀತ ಗಂಧ ಹರಡುತಿದೆ
ನಿನ್ನ ಬನದ ಹೂವಿನಿಂದ
ಮಾತು ಮಾತಿನಲ್ಲಿ ಚಿಮ್ಮುತಿಹುದು
ನಿನ್ನ ಒಲುಮೆ ವದನದಿಂದ
ಕಾಯ ಕಾರ್ಯದಲ್ಲಿ ಬೆರೆಯುತಿಹುದು
ನಿನ್ನ ಶಕ್ತಿ ಯುಕ್ತಿಯಿಂದ
ಬೀಜ ಹುಟ್ಟಿ ಬೆಳೆಯುತಿಹುದು
ನಿನ್ನ ಪ್ರಕೃತಿ ಚೆಲುವಿನಿಂದ
ಹಣತೆ ಚಾಚಿ ಬೆಳಗುತಿಹುದು
ನಿನ್ನ ಕೆಂಡ -ಕಾವಿನಿಂದ
ಭಾವ ಭಾವ ಬೇರೆಯುತಿಹುವು
ನಿನ್ನ ವಿಸ್ಮಯ ಬೆಸುಗೆಯಿಂದ
4 comments:
Kool man... Hope n wish environmentalists asks u 2 write a poem 4 dem :-)
Cheers,
Vijay...
thanku
Nice one.
Post a Comment